"ವಿಮಾನದ ಮೂಲಕ ಬರುವ ಚಿರತೆಗಳು ಅವುಗಳ ಮರುಸ್ಥಾಪನಾ ಯೋಜನೆಯನ್ನಾಗಿ ಮಾಡುವುದಿಲ್ಲ"
top of page
ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯನ್ನು ಮತ್ತೆ ಪರಿಚಯಿಸಲಾಯಿತು. (ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ/ದಿ ಕ್ಸೈಲೋಮ್ ಇಲಸ್ಟ್ರೇಷನ್)

This story features Beeline Reader for enhanced readability. Click to turn the feature on or off. Learn more about this technology here.

"ವಿಮಾನದ ಮೂಲಕ ಬರುವ ಚಿರತೆಗಳು ಅವುಗಳ ಮರುಸ್ಥಾಪನಾ ಯೋಜನೆಯನ್ನಾಗಿ ಮಾಡುವುದಿಲ್ಲ"

 ಅಧಿಕಾರಶಾಹಿತ್ವ, ಅಸಮರ್ಪಕ ವಿಜ್ಞಾನವು ಭಾರತದ ಚಿರತೆಗಳ ಪುನರ್ಸ್ಥಾಪನಾ ಯೋಜನೆಯನ್ನು ಮರೆಮಾಡಿದೆ. 

 
 

ಒಂದು ಕಾಲದಲ್ಲ ಸರ್ವವ್ಯಾಪಿಯಾಗಿದ್ದ ಭಾರತದ ಚಿರತೆಗಳು 1952 ರಲ್ಲಿ ಬೇಟೆ ಮತ್ತು ಅರಣ್ಯನಾಶದಿಂದಾಗಿ ಅಳಿದುಹೋದವು. ಆದರೆ, 2022 ರಲ್ಲಿ, ಅವುಗಳನ್ನು ಮರಳಿ ಕರೆತರಲು ಸರ್ಕಾರ ನಿರ್ಧರಿಸಿತು.

2022 ರಲ್ಲಿ ಎಂಟು ನಮೀಬಿಯನ್ ಚಿರತೆಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸಲಾಯಿತು. 2023 ರ ಆರಂಭದಲ್ಲಿ, ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಹುಲಿಗಳನ್ನು ಅವುಗಳೊಂದಿಗೆ ಸೇರಲು ಕರೆತರಲಾಯಿತು. "ನಮೀಬಿಯಾದಿಂದ ಕಳುಹಿಸಲಾದ ಪ್ರಾಣಿಗಳೆಲ್ಲವೂ ಆರೋಗ್ಯಕರ ಪ್ರಾಣಿಗಳು" ಎಂದು ನಮೀಬಿಯಾದ ಚೀತಾ ಸಂರಕ್ಷಣಾ ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕ ಲಾರಿ ಮಾರ್ಕರ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಿಂದ ತಂದ ಚಿರತೆಗಳು "ವಿಮಾನದಲ್ಲಿ ಹೆಚ್ಚು ಸಮಯ ಮಲಗಿ ಆರಾಮವಾಗಿದ್ದವು" ಎಂದು ಅವರು ಹೇಳಿದರು.

ಜನವರಿ 16 ರಂದು, ಸರ್ಕಾರಿ ಅಧಿಕಾರಿಗಳು ಮತ್ತೊಂದು ಚಿರತೆಯ ಸಾವನ್ನು ದೃಢಪಡಿಸಿದರು, ಸಾವಿನ ಸಂಖ್ಯೆ ಹತ್ತಕ್ಕೆ ಏರಿತು, ಇದರಲ್ಲಿ ಏಳು ಆಮದು ಮಾಡಿದ ವಯಸ್ಕ  ಚಿರತೆಗಳು ಮತ್ತು ಮೂರು ಭಾರತೀಯ ಮೂಲದ ಮರಿಗಳು ಸೇರಿವೆ. ಶಾಖದ ಹೊಡೆತ ಮತ್ತು ಸೋಂಕುಗಳಂತಹ ಅಸಂಖ್ಯಾತ ಆರೋಗ್ಯ ಸಮಸ್ಯೆಗಳಿಂದಾದ ಸಾವು ಈ ಸ್ಥಳಾಂತರದ ಹಿಂದಿನ ಪ್ರಕ್ರಿಯೆಯನ್ನು ಪ್ರಶ್ನಿಸುವಂತೆ ತಜ್ಞರನ್ನು ಪ್ರೇರೇಪಿಸಿದೆ.


ಭಾರತದ ಖಾಸಗಿ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್ ನ ನಿವೃತ್ತ ನಿರ್ದೇಶಕ ಉಲ್ಲಾಸ್ ಕಾರಂತ್ ಅವರು, ಈ ಯೋಜನೆಯು 2010 ರಲ್ಲಿ ಪ್ರಾರಂಭವಾದಾಗಿನಿಂದ ದೋಷಪೂರಿತವಾಗಿದೆ ಎಂದು ಹೇಳುವ ಅನೇಕ ಸಂರಕ್ಷಣಾ ತಜ್ಞರಲ್ಲಿ ಒಬ್ಬರು. ಸರ್ಕಾರಿ ಕ್ಯಾಬಿನೆಟ್ ಗಳು ತಮ್ಮ ಕೆಲಸವನ್ನು ಅವೈಜ್ಞಾನಿಕ ಮತ್ತು ವೃತ್ತಿಪರವಲ್ಲದ ರೀತಿಯಲ್ಲಿ ನಡೆಸುತ್ತಿವೆ ಎಂದು ಅವರು ಟೀಕಿಸಿದರು ಹಾಗು ಭಾರತದಲ್ಲಿ ಅಳಿವಿನ ಅಪಾಯದಲ್ಲಿರುವ ಇತರ ಪ್ರಭೇದಗಳನ್ನು ಪುನಃಸ್ಥಾಪಿಸುವತ್ತ ಸರ್ಕಾರ ಗಮನ ಹರಿಸಬೇಕಾಗಿತ್ತು ಎಂದು ಸಲಹೆ ನೀಡಿದರು.

"ವಿಮಾನದ ಮೂಲಕ ಬರುವ ಚಿರತೆಗಳು ಅವುಗಳ ಮರುಸ್ಥಾಪನಾ ಯೋಜನೆಯನ್ನಾಗಿ ಮಾಡುವುದಿಲ್ಲ" ಎಂದು ಅವರು ಪ್ರತಿಪಾದಿಸಿದರು.

 

ಜನವರಿ 2022 ರಲ್ಲಿ, ಭಾರತೀಯ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (ಎಂಒಇಎಫ್ ಮತ್ತು ಸಿಸಿ) ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಡಬ್ಲ್ಯುಐಐ) ಚೀತಾಗಳನ್ನು ಭಾರತಕ್ಕೆ ಮತ್ತೆ ಪರಿಚಯಿಸುವ ಕ್ರಿಯಾ ಯೋಜನೆಯನ್ನು ರೂಪಿಸಿತು, ಇದು ಚಿರತೆಗಳ ಸಂಖ್ಯೆಯನ್ನು ಸ್ಥಾಪಿಸಿ, ಅವುಗಳ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಜಾಗತಿಕ ಸಂರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.

ಮೊದಲ ನೋಟಕ್ಕೆ, ಇದು ಉತ್ತಮ ಉಪಾಯವೆಂದು ತೋರುತ್ತದೆ.

"2050 ರ ವೇಳೆಗೆ, ನಾವು ಭೂಮಿಯ ಮೇಲಿನ ಸಸ್ತನಿಗಳಲ್ಲಿ 40 ಪ್ರತಿಶತದಷ್ಟನ್ನು ಕಳೆದುಕೊಳ್ಳುತ್ತೇವೆ ಎಂದು ಊಹಿಸಲಾಗಿದೆ" ಎಂದು ಮಾರ್ಕರ್ ಹೇಳಿದರು. "ಪ್ರಾಣಿಗಳ ಸಹಜವಾಸಸ್ಥಾನದ ಕೊರತೆ ಮತ್ತು ಮಾನವ-ವನ್ಯಜೀವಿ ಸಂಘರ್ಷದಿಂದಾಗಿ ಆಗುವ ಪರಭಕ್ಷಕ ಪ್ರಾಣಿಗಳ ಕೊರತೆಯು ಅತಿದೊಡ್ಡ ನಷ್ಟಗಳಲ್ಲಿ ಒಂದಾಗಿದೆ."

ಆದಾಗ್ಯೂ, ಪರಿಸರ ತಜ್ಞ ಘಝಾಲಾ ಶಹಾಬುದ್ದೀನ್ ಸೇರಿದಂತೆ ಇತರ ತಜ್ಞರು ಇದು ಪ್ರಾರಂಭವಾಗುವ ಮೊದಲು ಪರಿಚಯಿಸುವುದರ ಹಿಂದಿನ ಪ್ರೇರಣೆಗಳನ್ನು ಅನುಮಾನಿಸಿದರು.

ಅವರು 2019 ರ ಪುಸ್ತಕದ ಅಧ್ಯಾಯದಲ್ಲಿ ಈ ನಿರ್ಧಾರವು "ರಾಜಕೀಯ ಪ್ರೇರಿತವಾಗಿದ್ದು ಪರಿಸರ ವಿಜ್ಞಾನದಲ್ಲಿ ಸೀಮಿತ ತಳಹದಿಯನ್ನು ಹೊಂದಿದೆ" ಎಂದು ಬರೆದಿದ್ದಾರೆ. ಉದಾಹರಣೆಗೆ, ಚಿರತೆಗಳು ಬಂದ ದಿನ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ 72 ನೇ ಹುಟ್ಟುಹಬ್ಬದಂದು ಹೊಂದಿಕೆಯಾಯಿತು.

ಮೂರು ಚಿರತೆ ಮರಿಗಳ ಸಾವಿನ ನಂತರ, ಎಂಒಇಎಫ್ ಮತ್ತು ಸಿಸಿ ಮೇ 2023 ರ ಪತ್ರಿಕಾ ಪ್ರಕಟಣೆಯಲ್ಲಿ ಅವರು ಎದುರಿಸಿದ ಸವಾಲುಗಳನ್ನು ಒಪ್ಪಿಕೊಳ್ಳಬೇಕಾಯಿತು. " ಯಾವುದೇ ಹೋಲಿಸಬಹುದಾದ ಐತಿಹಾಸಿಕ ಪೂರ್ವನಿದರ್ಶನವನ್ನು" ಹೊಂದಿರದ " ದೊಡ್ಡ ಮಾಂಸಾಹಾರಿ ವನ್ಯಜೀವಿ ಪ್ರಭೇಧದ ಮೊದಲ ಖಂಡಾಂತರ ಮರು ಪರಿಚಯವನ್ನು" ಯಶಸ್ವಿಯಾಗಿ ಕಾರ್ಯಗತಗೊಳಿಸಲು ಅವರು ವಿಶ್ವದಾದ್ಯಂತದ ಕೆಲವು ಅತ್ಯುತ್ತಮ ತಜ್ಞರನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಚೀತಾ ಪ್ರಾಜೆಕ್ಟ್ ಸ್ಟೀರಿಂಗ್ ಸಮಿತಿಗೆ ಕರೆತಂದರು.

ಪಶುವೈದ್ಯಕೀಯ ವನ್ಯಜೀವಿ ತಜ್ಞ ಮತ್ತು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ವಿಶ್ವವಿದ್ಯಾಲಯದ ಪ್ಯಾರಾಕ್ಲಿನಿಕಲ್ ಸೈನ್ಸಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಆಡ್ರಿಯನ್ ಟೊರ್ಡಿಫೆ, ಮಾರ್ಕರ್ ಅವರೊಂದಿಗೆ ಸಮಿತಿಯ ಸಲಹಾ ಮಂಡಲಿಯ ಸದಸ್ಯರಾಗಿದ್ದರು. 2020 ರ ಆರಂಭದಲ್ಲಿ  ಡಬ್ಲ್ಯುಐಐನ ಮಾಜಿ ಡೀನ್ ಮತ್ತು ಡಬ್ಲ್ಯುಐಐ ಕ್ರಿಯಾ ಯೋಜನೆಯ ಮೊದಲ ಲೇಖಕ ಪರಿಸರಶಾಸ್ತ್ರಜ್ಞ ವೈ.ವಿ.ಝಾಲಾ ಅವರನ್ನು ಸಂಪರ್ಕಿಸಿದಾಗ ಈ ಯೋಜನೆಯಲ್ಲಿ ಅವರೂ ಪಾಲ್ಗೊಂಡರು.

"ಆರಂಭದಲ್ಲಿ, ಅವರು ತುಂಬಾ ಉತ್ಸುಕರಾಗಿದ್ದರು, ಈ ಪ್ರಮಾಣದ ಯೋಜನೆಯನ್ನು ಮುಂದುವರಿಸುವುದು ತುಂಬಾ ಕಷ್ಟ, ಏಕೆಂದರೆ ಅದಕ್ಕೆ ಸಂರಕ್ಷಣೆ ಮತ್ತು ರಾಜಕೀಯ ಅಂಶಗಳಿವೆ" ಎಂದು ಅವರು ಭಾರತೀಯ ಅಧಿಕಾರಿಗಳ ವರ್ತನೆಯನ್ನು ಉಲ್ಲೇಖಿಸಿ ಹೇಳಿದರು.

ಆದರೆ ಯೋಜನೆಯು ಮುಂದುವರಿದಂತೆ, ಸರ್ಕಾರವು ತನ್ನನ್ನು ಸ್ವಲ್ಪ ದೂರದಲ್ಲಿ ಇರಿಸಿದೆ ಎಂದು ಟಾರ್ಡಿಫೆ ಭಾವಿಸಿದರು.

 "ನನಗೆ ಮಾಹಿತಿ ಪಡೆಯುವಲ್ಲಿ ವಿಳಂಬವಾಯಿತು" ಎಂದು ಟೊರ್ಡಿಫ್ ಹೇಳಿದರು. "ಮೊದಲ ಚಿರತೆ ಮಂಗಳವಾರ ಸತ್ತುಹೋಯಿತು, ಮತ್ತು ಸತ್ತ [ಮೊದಲ] ಪ್ರಾಣಿಯ ವೀಡಿಯೊವನ್ನು ಪಡೆಯುವ ಮೊದಲೇ ಎರಡನೇ ಚಿರತೆಯೂ ಸತ್ತಿತ್ತು."

ಅವರನ್ನು ಹಾಗೂ ಇತರ ಸದಸ್ಯರನ್ನು ಒಂದೇ ಒಂದು ಸಭೆಗೂ ಆಹ್ವಾನಿಸಲಿಲ್ಲ ಅನ್ನುವುದು, ಅವರ ಹತಾಶೆಯನ್ನು ವ್ಯಕ್ತಪಡಿಸಲು ಭಾರತೀಯ ಸುಪ್ರೀಂ ಕೋರ್ಟ್ ಗೆ ಪತ್ರ ಬರೆಯಲು ಪ್ರೇರೇಪಿಸಿತು. "ಇದು ಕೇವಲ ಪ್ರದರ್ಶನಕ್ಕಾಗಿ ಎಂದು ತೋರುತ್ತದೆ."


 

ಹಾಗಾದರೆ, ಚಿರತೆಗಳು ನಿಖರವಾಗಿ ಹೇಗೆ ಸತ್ತವು?

ದೊಡ್ಡ ಮಾಂಸಾಹಾರಿ ವನ್ಯಜೀವಿಗಳ  ಮರುಪರಿಚಯ ಯೋಜನೆಗಳು ಅಂತರ್ಗತವಾಗಿ ಅಪಾಯಕಾರಿ ಏಕೆಂದರೆ ಪರಭಕ್ಷಕಗಳಿಗೆ ವ್ಯಾಪಕವಾದ ಸೂಕ್ತ ವಾಸಸ್ಥಾನ ಮತ್ತು ಹೇರಳವಾದ ಕಾಡು ಬೇಟೆಯ ನೆಲೆಯ ಅಗತ್ಯವಿದೆ ಎಂದು ಕಾರಂತರು ವಿವರಿಸಿದರು. ಕೇವಲ 5% ಚಿರತೆಗಳು ಜನನದಿಂದ ಸಂತಾನೋತ್ಪತ್ತಿ ವಯಸ್ಸಿನವರೆಗೆ ಬದುಕುಳಿಯುತ್ತವೆ, ಇದು ಬದುಕುಳಿಯುವ ಪ್ರಮಾಣ ಕಡಿಮೆ. ಇತರ ದೊಡ್ಡ ಬೆಕ್ಕುಗಳಿಗೆ ಹೋಲಿಸಿದರೆ ಇದು ಅವುಗಳನ್ನು ಹೆಚ್ಚು ಅಪಾಯಕ್ಕೆ ತಳ್ಳುತ್ತದೆ. "ಅವು ಅಂಜುಬುರುಕ ಬೆಕ್ಕುಗಳಾಗಿದ್ದು ಸಿಂಹಗಳು, ಚಿರತೆಗಳು ಮತ್ತು ಹೈನಾಗಳಂತಹ ದೊಡ್ಡ ಪರಭಕ್ಷಕಗಳ ಪ್ರಾಬಲ್ಯ ಹೊಂದಿರುವುದರಿಂದ ಹೆಚ್ಚಿನ ಸಾವು ಸಂಭವಿಸುತ್ತವೆ" ಎಂದು ಅವರು ಹೇಳಿದರು.

ಅಕ್ಟೋಬರ್ 2023 ರಲ್ಲಿ ಭಾರತೀಯ ಸಂಸತ್ತನ್ನುದ್ದೇಶಿಸಿ ಮಾತನಾಡಿದ ಎಂಒಇಎಫ್ ಮತ್ತು ಸಿಸಿ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, ಚೀತಾಗಳು ಹೃದಯ ಶ್ವಾಸಕೋಶದ ವೈಫಲ್ಯ, ಅಹಿತಕಾರಿ ಆಘಾತ ಮತ್ತು ದೀರ್ಘಕಾಲದ ಮೂತ್ರಪಿಂಡ ವೈಫಲ್ಯದಂತಹ ಹಲವಾರು ಕಾರಣಗಳಿಗಾಗಿ ಸಾವನ್ನಪ್ಪಿದ್ದರೆ, ಮೂರು ಮರಿಗಳು ಶಾಖದ ಆಘಾತದಿಂದ ಸಾವನ್ನಪ್ಪಿವೆ ಎಂದು ಹೇಳಿದ್ದಾರೆ. ಜೂನ್ 2023 ರಲ್ಲಿ ಇಂಡಿಯಾಸ್ಪೆಂಡ್ ಗೆ ನೀಡಿದ ಸಂದರ್ಶನದಲ್ಲಿ, ಟಾರ್ಡಿಫ್ ಈ ಸಾವುಗಳಲ್ಲಿ ಕೆಲವು ಒತ್ತಡ, ಅನಿರೀಕ್ಷಿತ ಪ್ರತ್ಯೇಕ ಘಟನೆಗಳು ಮತ್ತು ಅಪೌಷ್ಟಿಕತೆಗೆ ಕಾರಣವಾಗಿದೆ ಎಂದು ಹೇಳಿದರು.

"ಚಿರತೆಗಳು ಬಹಳ ಸೂಕ್ಷ್ಮ ಪ್ರಾಣಿಗಳು" ಎಂದು ಮಾರ್ಕರ್ ಹೇಳಿದರು. ಅವುಗಳು ವಿಶೇಷವಾಗಿ ನಿರ್ಜಲೀಕರಣಗೊಂಡಾಗ ಅಥವಾ ದೀರ್ಘಕಾಲದವರೆಗೆ ಆಹಾರವಿಲ್ಲದೆ ಹೋದಾಗ ಸುಲಭವಾಗಿ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಬಹುದು  ಎಂದು ಅವರು ಹೇಳಿದರು.

ಇದಲ್ಲದೆ, ಈ ಸಾವುಗಳಲ್ಲಿ ಕನಿಷ್ಠ ಎರಡು ಸೆಪ್ಟಿಸೆಮಿಯಾದಿಂದ ಸಂಭವಿಸಿದ್ದು, ಅಲ್ಲಿ ಚಿರತೆಗಳ ರಕ್ತವು ಬ್ಯಾಕ್ಟೀರಿಯಾದಿಂದ ವಿಷಮಯವಾಯಿತು ಎಂದು ತಜ್ಞರು ಹೇಳಿದ್ದಾರೆ. ಭಾರತೀಯ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಹಿರಿಯ ಅಧಿಕಾರಿ ಎಸ್.ಪಿ.ಯಾದವ್, ಈ ದಕ್ಷಿಣ ಆಫ್ರಿಕಾದ ಚಿರತೆಗಳನ್ನು ದಕ್ಷಿಣ ಗೋಳಾರ್ಧದಿಂದ ಸ್ಥಳಾಂತರಿಸಲಾಗಿದ್ದು, ಅಲ್ಲಿ ಋತುಗಳು ವಿರುದ್ದವಾಗಿರುತ್ತವೆ: ಹೀಗಾಗಿ ಭಾರತದಲ್ಲಿ ಮಾನ್ಸೂನ್ ಋತುವಾಗಿದ್ದ ಚಳಿಗಾಲದ ಋತುವಿನ ಸಿದ್ಧತೆಯಲ್ಲಿ ಪ್ರಾಣಿಗಳು ದಪ್ಪವಾದ ಕವಚವನ್ನು ಅಭಿವೃದ್ಧಿಪಡಿಸಿದವು ಎಂದು ವಿವರಿಸಿದರು. ದಪ್ಪವಾದ ಕವಚಗಳು ಹೆಚ್ಚು ಸಮಯದವರೆಗೆ ತೇವವಾಗಿರುವುದರಿಂದ ಪ್ರಾಣಿಗಳಲ್ಲಿ ಚರ್ಮದ ಸೋಂಕು ಉಂಟಾಯಿತು. ಹೆಚ್ಚಿನ ವಿವಾದವು ಚಿರತೆಗಳ ಕುತ್ತಿಗೆಗೆ ಜೋಡಿಸಲಾದ ರೇಡಿಯೋ ಕಾಲರ್ ಗಳ ಮೇಲೆ ಕೇಂದ್ರೀಕೃತವಾಗಿತ್ತು, ಆದರೆ ಮಾರ್ಕರ್ ಮತ್ತು ಟಾರ್ಡಿಫ್ ಇಬ್ಬರೂ ಈಗ ಇದನ್ನು ದ್ವಿತೀಯ ಕಾರಣವೆಂದು ಪರಿಗಣಿಸುತ್ತಾರೆ.


A reintroduced cheetah in Kuno National Park.
ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆ ಪರಿಚಯಿಸಲಾದ ಚಿರತೆ. (ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಭಾರತ ಸರ್ಕಾರ/ ಕ್ಸೈಲೋಮ್ ವಿವರಣೆ)

ಯೋಜನೆಯ ವಾರ್ಷಿಕೋತ್ಸವದ ಮುನ್ನಾದಿನದಂದು ಭಾರತ ಸರ್ಕಾರವು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಹೆಚ್ಚಿನ ಚಿರತೆಗಳನ್ನು ಪರಿಚಯಿಸಲಾಗುವುದು ಎಂದು ಘೋಷಿಸಿದಾಗ, ದಪ್ಪ ಕೋಟುಗಳನ್ನು ಅಭಿವೃದ್ಧಿಪಡಿಸದ ಚಿರತೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಯಾದವ್ ಹೇಳಿದರು. ಆ ತಿಂಗಳ ಕೊನೆಯಲ್ಲಿ, ಯಾದವ್ ಸ್ಥಳೀಯ ಪರಿಸರ ನಿಯತಕಾಲಿಕ ಡೌನ್ ಟು ಅರ್ತ್ ಗೆ  ನೀಡಿದ ಸಂದರ್ಶನದಲ್ಲಿ, ಚಿರತೆಗಳನ್ನು ದಕ್ಷಿಣ ಆಫ್ರಿಕಾದಿಂದ ಮಾತ್ರ ಸ್ಥಳಾಂತರಿಸಲಾಗುವುದು ಆದರೆ ನಮೀಬಿಯಾದಿಂದ ಅಲ್ಲ ಎಂದು ಹೇಳಿದರು. ಅದೇ ಸಂದರ್ಶನದಲ್ಲಿ, ಟಾರ್ಡಿಫ್ ಅವರು ಎದುರಿಸಿದ ಅದೇ ಸಂವಹನ ಮತ್ತು ಪಾರದರ್ಶಕತೆಯ ಸಮಸ್ಯೆಗಳು, ಜೊತೆಗೆ ವೆಚ್ಚದ ಅಂಶಗಳು ಒಂದು ಪಾತ್ರವನ್ನು ವಹಿಸಿರಬಹುದು ಎಂದು ಅನುಮಾನಿಸಿದರು.

"ಭಾರತ ಸರ್ಕಾರವು ತಮ್ಮದೇ ಆದ ಯೋಜನೆಗಳನ್ನು ಹೊಂದಿದೆ, ನಾವು ಸರ್ಕಾರಗಳಿಗೆ ಸಲಹೆ ನೀಡುತ್ತೇವೆ." ಎಂದು ಮಾರ್ಕರ್ ಕ್ಸೈಲೋಮ್ ಗೆ ಒಪ್ಪಿಕೊಂಡರು.

ಆದರೂ, ಮರು ಪರಿಚಯ ಯೋಜನೆಯ ದೀರ್ಘಕಾಲೀನ ಕಾರ್ಯಸಾಧ್ಯತೆಗೆ ಬಂದಾಗ ಈ ಸರಿಪಡಿಸಬಹುದಾದ ಸಮಸ್ಯೆಗಳು ಕನಿಷ್ಠ ಸಮಸ್ಯೆಗಳಾಗಿ ಕಂಡುಬರುತ್ತವೆ.


 

ಡಬ್ಲ್ಯುಐಐನ 2022 ರ ಕ್ರಿಯಾ ಯೋಜನೆಯು ಮಾಡಿದ ಒಟ್ಟು 10 ಸಮೀಕ್ಷಾ ಸ್ಥಳಗಳಿಂದ ಕುನೊ ರಾಷ್ಟ್ರೀಯ ಉದ್ಯಾನವನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದೆ. ಕುನೊದ ಅಸ್ತಿತ್ವದಲ್ಲಿರುವ ಬೇಟೆಯ ನೆಲೆಯ ಆಧಾರದ ಮೇಲೆ ಅಂದಾಜು ಮಾಡಿದ ಡಬ್ಲ್ಯುಐಐ, ಈ ಉದ್ಯಾನವನವು ಪ್ರಸ್ತುತ ಗ್ರಾಮಗಳನ್ನು ಸ್ಥಳಾಂತರಿಸಿದರೆ 21 ಚಿರತೆಗಳನ್ನು ಹಾಗು ಭವಿಷ್ಯದಲ್ಲಿ 36 ಚಿರತೆಗಳನ್ನು ಈ ನೆಲೆಯ ಉದ್ದಕ್ಕೂ ಹರಡಿದಂತೆ ಉಳಿಸಿಕೊಳ್ಳಬಹುದು ಎಂದು ಹೇಳಿದೆ.

ಈ ಊಹೆಗೆ ಎರಡು ನ್ಯೂನತೆಗಳಿವೆ. ಮೊದಲನೆಯದು ಬೇಟೆಯ ಲಭ್ಯತೆ ಒಂದೇಸಮ ಕುಸಿಯುತ್ತಿದೆ: ಕಳೆದ ಮಾರ್ಚ್ ನಲ್ಲಿ ಸಂದರ್ಶನವೊಂದರಲ್ಲಿ, ಡಬ್ಲ್ಯುಐಐ ಕ್ರಿಯಾ ಯೋಜನೆಯ ಮೊದಲ ಲೇಖಕ ಝಾಲಾ, ಚಿರತೆಯ ಮುಖ್ಯ ಬೇಟೆಯಾದ ಚಿಟಾಲ್ (ಒಂದು ಜಾತಿಯ ಜಿಂಕೆ) ನ ಲಭ್ಯತೆಯು ಒಂದು ದಶಕಕ್ಕೆ ಹಿಂದೆ ಹೋಲಿಸಿದರೆ ಮೂರನೇ ಒಂದು ಭಾಗಕ್ಕೆ ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.

"ಇದು ಹೆಚ್ಚೆಂದರೆ 15 ಪ್ರಾಣಿಗಳನ್ನು ಪೋಷಿಸುತ್ತದೆ ಮತ್ತು ಐದು ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗಿತ್ತು" ಎಂದು ಅವರು  ದಿ ಹಿಂದೂಗೆ ತಿಳಿಸಿದರು.

ಅದೇ ವಾರ, ಅನಾಮಧೇಯ ಸಹೋದ್ಯೋಗಿಯೊಬ್ಬರು ವಿಜ್ಞಾನದ ಜೊತೆ ರಾಜಿ ಮಾಡಿಕೊಳ್ಳಲು ನಿರಾಕರಿಸುವ ಮೂಲಕ "ಸಂಸ್ಥೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ" ಎಂದು ವಿವರಿಸಿದ ನಂತರ ಝಾಲಾ ಅವರ ಒಪ್ಪಂದವನ್ನು ಮೊಟಕುಗೊಳಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ಸ್ ವರದಿ ಮಾಡಿದೆ.

"ಒಮ್ಮೆ ಅವರನ್ನು ಬಲವಂತವಾಗಿ ಯೋಜನೆಯಿಂದ ಹೊರಹಾಕಿದ ನಂತರ, ವಿಷಯಗಳು ಸ್ವಲ್ಪ ಬದಲಾದವು" ಎಂದು ಟಾರ್ಡಿಫ್ ಗಮನಿಸಿದರು.

ಇದಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಈ ಕೃತ್ಯದಲ್ಲಿ ಸಿಕ್ಕಿಬಿದ್ದ ಅನೇಕ ಕಳ್ಳ ಬೇಟೆಗಾರರ ಘಟನೆಗಳನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತಾನು ಮತ್ತು ಅವನ ಸಹೋದ್ಯೋಗಿಗಳು ಕುನೊದಲ್ಲಿದ್ದಾಗ ಬೇಟೆಗಾರರಿಂದ ಗುಂಡಿನ ಶಬ್ದ ಕೇಳಿದ್ದನ್ನು ಟಾರ್ಡಿಫ್ ಸ್ವತಃ ನೆನಪಿಸಿಕೊಂಡರು. ಕಳ್ಳ ಬೇಟೆಗಾರರ ಎರಡು ವಿಧದ ಪರಿಣಾಮಗಳಿವೆ: ಅವರು ಚಿರತೆಗಳು ಹಾಗು ಅವುಗಳ ಬೇಟೆ ಎರಡನ್ನೂ ಬೇಟೆಯಾಡುತ್ತಾರೆ.

ಎರಡನೆಯದಾಗಿ, ಗಣಿತದ ಮಾದರಿಯು ಸುತ್ತಮುತ್ತಲಿನ ಪ್ರದೇಶದ ಹಳ್ಳಿಗಳ ಸ್ಥಳಾಂತರದ ಮೇಲೆ ಅವಲಂಬಿತವಾಗಿದೆ. ಡಬ್ಲ್ಯುಐಐ ಕ್ರಿಯಾ ಯೋಜನೆಯಲ್ಲಿ ಬಾಗ್ಚಾ ಗ್ರಾಮದಲ್ಲಿ ನಡೆಯುತ್ತಿರುವ "ಪ್ರೋತ್ಸಾಹಿತ ಸ್ವಯಂಪ್ರೇರಿತ ಸ್ಥಳಾಂತರ" ದ ಬಗ್ಗೆ ಒಂದು ಉಲ್ಲೇಖವನ್ನು ಮಾಡಲಾಗಿದೆ. ಬಾಗ್ಚಾದಲ್ಲಿ 556 ಸಹರಿಯಾ ಆದಿವಾಸಿಗಳು ವಾಸಿಸುತ್ತಿದ್ದಾರೆ ಎಂಬ ಅಂಶವನ್ನು ಅದು ಕೈಬಿಟ್ಟಿದೆ, ಇದು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪಾಗಿದೆ. ಸಂಪನ್ಮೂಲಗಳಿಗಾಗಿ ಅರಣ್ಯವನ್ನು ಅವಲಂಬಿಸಿದ್ದ ಈ ಆದಿವಾಸಿಗಳಿಗೆ ಸ್ಥಳಾಂತರಗೊಳ್ಳಲು ಕೇವಲ $ 18,000 ಶುಲ್ಕವನ್ನು ಪಾವತಿಸಲಾಯಿತು ಮತ್ತು ದಾಖಲೆಯಲ್ಲಿ ಅನೇಕ ನಿವಾಸಿಗಳು ಬೇರೆ ರೀತಿಯಲ್ಲಿ ಹೇಳಿಕೊಂಡಿದ್ದರೂ, ಅವರನ್ನು ತೊರೆಯುವಂತೆ ಒತ್ತಾಯಿಸಲಾಗಿಲ್ಲ ಎಂಬ ಘೋಷಣೆಗಳಿಗೆ ಸಹಿ ಹಾಕುವಂತೆ ಮಾಡಲಾಯಿತು ಎಂದು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ವರದಿ ಮಾಡಿದೆ.

ಡಬ್ಲ್ಯುಐಐ ಕ್ರಿಯಾ ಯೋಜನೆಯ ಮಾದರಿಯಲ್ಲಿ 36 ಚಿರತೆಗಳಿಗೆ ಸಂಭಾವ್ಯ ವಾಸಸ್ಥಾನವನ್ನು ರಚಿಸಲು, ಹೆಚ್ಚುವರಿ 169 ಗ್ರಾಮಗಳನ್ನು ತೆರವುಗೊಳಿಸಬೇಕಾಗಿದೆ. ನೈತಿಕ ಕಾಳಜಿಗಳು ಮತ್ತು ಆರ್ಥಿಕ ವೆಚ್ಚಗಳ ಹೊರತಾಗಿಯೂ, ಸ್ಥಳಾಂತರದ ಪ್ರಕ್ರಿಯೆಯಲ್ಲಿಯೂ, ಮಾನವ-ಚಿರತೆ ಸಂಘರ್ಷಕ್ಕೆ ಹೆಚ್ಚಿನ ಸಾಮರ್ಥ್ಯವಿದೆ.

"ಆಫ್ರಿಕಾದಲ್ಲಿನ ಚೀತಾ ಅಧ್ಯಯನಗಳು ಅತ್ಯುತ್ತಮ ಆವಾಸಸ್ಥಾನಗಳಲ್ಲಿಯೂ ಸಹ, ಚಿರತೆಗಳು 100 ಚದರ ಕಿಲೋಮೀಟರ್ ಗೆ ಒಂದು ಚೀತಾಕ್ಕಿಂತ ಕಡಿಮೆ ಸಾಂದ್ರತೆಯಲ್ಲಿ ಕಂಡುಬರುತ್ತವೆ ಎಂದು ತೋರಿಸುತ್ತವೆ" ಎಂದು ಕಾರಂತರು ಹೇಳಿದರು. ಚಿರತೆಗಳನ್ನು ಪುನಃಸ್ಥಾಪಿಸುವ ಮೊದಲು ಸಾಕಷ್ಟು ಬೇಟೆಯ ನೆಲೆಯನ್ನು ಹೊಂದಿರುವ ಮತ್ತು ಇತರ ಪರಭಕ್ಷಕಗಳು ಸೇರಿದಂತೆ ಪ್ರಮುಖ ಬೆದರಿಕೆಗಳಿಂದ ಮುಕ್ತವಾದ 10,000 ಚದರ ಕಿಲೋಮೀಟರ್ ಪ್ರದೇಶವನ್ನು ಮೊದಲು ರಚಿಸಬೇಕು ಎಂದು ಸಹ ಪರಿಸರ ತಜ್ಞರು ಒಪ್ಪುತ್ತಾರೆ ಎಂದು ಅವರು ಹೇಳಿದ್ದಾರೆ.

"ಆದರೂ ಎನ್ಟಿಸಿಎಯ ಅರಣ್ಯ ಅಧಿಕಾರಿ ವರ್ಗ ಮತ್ತು ಡಬ್ಲ್ಯುಐಐನ ಅದರ ವಿಧೇಯ ವಿಜ್ಞಾನಿಗಳು ಆಳವಾದ ದೋಷಪೂರಿತ ಸಂಖ್ಯಾ ಡೈನಾಮಿಕ್ಸ್ ಮಾದರಿಯನ್ನು ಅವಲಂಬಿಸಿ 800 ಚದರ ಕಿಲೋಮೀಟರ್ ಕುನೊ ಪಾರ್ಕ್ ಮತ್ತು ಸುತ್ತಮುತ್ತಲಲ್ಲಿ 36 ಸಂಖ್ಯೆಯ ವನ್ಯ ಚಿರತೆಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿದರು" ಎಂದು ಕಾರಂತ್ ಹೇಳಿದರು.

"ನಮ್ಮ ಸರ್ಕಾರಿ ವಿಜ್ಞಾನಿಗಳು, ಅರಣ್ಯ ಅಧಿಕಾರಿ ವರ್ಗ ಮತ್ತು ಅವರ ಮಾತುಗಳನ್ನು ಆಲಿಸುವ ಮತ್ತು ಧನಸಹಾಯ ಮಾಡುವ ಅವರ ಮೇಲಿರುವ ರಾಜಕಾರಣಿಗಳು ಈ ವಿಪತ್ತಿಗೆ ಜವಾಬ್ದಾರರಾಗಿರುತ್ತಾರೆ."


 

ಬ್ಯಾಂಟೆಂಗ್, ಏಕ ಕೊಂಬಿನ ಖಡ್ಗಮೃಗ, ಸುಮಾತ್ರನ್ ಖಡ್ಗಮೃಗ, ಜಾವಾನ್ ಖಡ್ಗಮೃಗ ಮತ್ತು ಹುಬ್ಬು-ಕೊಂಬು ಜಿಂಕೆ ಸೇರಿದಂತೆ ಇತರ ಅನೇಕ ಪ್ರಭೇದಗಳಿಗೆ ಇದೇ ರೀತಿಯ ಪುನರುಜ್ಜೀವನ ಪ್ರಯತ್ನಗಳ ಅಗತ್ಯವಿದೆ ಎಂದು ಕಾರಂತರು ಗಮನಿಸಿದರು. ಈ ಎಲ್ಲಾ ಪ್ರಭೇದಗಳು ಭಾರತದಲ್ಲಿ ಅಳಿದುಹೋಗಿವೆ ಅಥವಾ ಬಹಳ ಕುಸಿತವನ್ನು ಅನುಭವಿಸಿವೆ. ಆದರೆ ಚಿರತೆಗಳನ್ನು ಮತ್ತೆ ಪರಿಚಯಿಸುವಂತೆಯೇ, ಅಂತಹ ಯಾವುದೇ ಯೋಜನೆಗಳು ಸಾಕಷ್ಟು ಉತ್ತಮ ವಿಜ್ಞಾನ ಮತ್ತು ನಿಜವಾದ ಅನುಷ್ಠಾನ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

 "ವನ್ಯ ಚಿರತೆಗಳ ಸಂಖ್ಯೆಯನ್ನು ಸ್ಥಾಪಿಸುವುದು, ಅವು ಬೇಟೆಯಾಡಿದ ನೈಸರ್ಗಿಕ ಬೇಟೆಯನ್ನು ತಿಂದು ಬದುಕುಳಿಯುವುದು, ಪ್ರದೇಶಗಳನ್ನು ಸ್ಥಾಪಿಸುವುದು ಮತ್ತು ನಂತರ ಕಾಡಿನಲ್ಲಿ ಸಂತಾನೋತ್ಪತ್ತಿ ಮಾಡುವುದು ಮತ್ತು ಕಾಲಾನಂತರದಲ್ಲಿ ಸಂಖ್ಯೆಯನ್ನು ಹೆಚ್ಚಿಸುವುದು ಇದರ ಗುರಿಯಾಗಿತ್ತು ಎಂಬುದನ್ನು ಎಲ್ಲರೂ ಮರೆತುಬಿಡುತ್ತಾರೆ" ಎಂದು ಕಾರಂತರು ಹೇಳಿದರು. "ಅದ್ಯಾವುದೂ ಆಗಲೇ ಇಲ್ಲ."

ಹಿಂದಿನ ಸಂದರ್ಶನಗಳಲ್ಲಿ ಕೆಲವೊಮ್ಮೆ ಅವರು ಹೆಚ್ಚು ಸಕಾರಾತ್ಮಕ ಮತ್ತು ಎಚ್ಚರಿಕೆಯ ಧ್ವನಿಯನ್ನು ವ್ಯಕ್ತಪಡಿಸಿದ್ದರೂ, ಚಿರತೆಗಳ ಸಾವು ಹೆಚ್ಚುತ್ತಿರುವುದರಿಂದ ಮತ್ತು ಮರು ಪರಿಚಯಿಸುವ ಯೋಜನೆಗಳು ವಿಫಲವಾಗುತ್ತಿರುವುದರಿಂದ, ಟಾರ್ಡಿಫ್ ಅವರು ಕಾರ್ಯಕ್ರಮದ ಭವಿಷ್ಯದ ಬಗ್ಗೆ ಹೆಚ್ಚು ನಿರಾಶಾವಾದಿಯಾಗಿದ್ದಾರೆ.

"ಈ ಹಂತದಲ್ಲಿ, ನಾನು ನಿಜವಾಗಿಯೂ ಯೋಜನೆಯಲ್ಲಿ ಭಾಗಿಯಾಗುವುದನ್ನು ಬಿಟ್ಟುಬಿಟ್ಟಿದ್ದೇನೆ, ಈಗ ಯೋಜನೆಯ ಯಾವುದೇ ಅಂಶದ ಬಗ್ಗೆ ಸಮಾಲೋಚಿಸಲಾಗಿಲ್ಲ" ಎಂದು ಅವರು ಹೇಳಿದರು.


 



Support Student-Led Science News

The only student-run newsroom focused on science and society. Our in-depth, data-driven approach, mentorship for early-career storytellers, and multicultural content take time and proactive planning, which is why The Xylom depends on reader support. Your gifts keep our unbiased, nonprofit news site free.
37221767_728738530791315_276894873407822

ಪ್ರಗತಿ ರವಿ

ಪ್ರಗತಿ ರವಿ ಅವರು ಭಾರತದಲ್ಲಿ ಹವಾಮಾನ ನ್ಯಾಯ, ಇಂಧನ ಪರಿವರ್ತನೆ ಮತ್ತು ಸಂರಕ್ಷಣಾ ವಿಜ್ಞಾನವನ್ನು ವರದಿ ಮಾಡುವ ಸ್ವತಂತ್ರ ಪತ್ರಕರ್ತರಾಗಿದ್ದಾರೆ. ಅವರು ತಮ್ಮ ವರದಿಗಾರಿಕೆಯನ್ನು ಬೆಂಬಲಿಸಲು ಪುಲಿಟ್ಜರ್ ಸೆಂಟರ್ ಮತ್ತು ಅರ್ತ್ ಜರ್ನಲಿಸಂ ನೆಟ್ವರ್ಕ್ ನಿಂದ ಅನುದಾನವನ್ನು ಪಡೆದಿದ್ದಾರೆ.

bottom of page